ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಫಲಾನುಭವಿಗಳನ್ನು ವಂಚಿಸುತ್ತಿರುವ ದಲ್ಲಾಳಿಗಳು: ಮುಮ್ತಾಝ್ ಅಲಿ ಖಾನ್

ಬೆಂಗಳೂರು: ಫಲಾನುಭವಿಗಳನ್ನು ವಂಚಿಸುತ್ತಿರುವ ದಲ್ಲಾಳಿಗಳು: ಮುಮ್ತಾಝ್ ಅಲಿ ಖಾನ್

Sun, 01 Nov 2009 03:00:00  Office Staff   S.O. News Service
ಬೆಂಗಳೂರು, ಅ.30: ಅಲ್ಪಸಂಖ್ಯಾತರಿಗೆ ಲಭ್ಯವಿರುವ ಸರಕಾರದ ವಿವಿಧ  ಯೋಜ ನೆಗಳ ಲಾಭ ಫಲಾನುಭವಿಗಳಿಗೆ ನೇರವಾಗಿ ತಲುಪದಿರಲು ದಲ್ಲಾಳಿಗಳು ಪ್ರಮುಖ ಕಾರಣ ಎಂದು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಖಾತೆ ಸಚಿವ ಮುಮ್ತಾಝ್ ಅಲಿ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ಅಲ್ಪ ಸಂಖ್ಯಾತ ಆಯೋಗ ಹಮ್ಮಿಕೊಂಡಿದ್ದ ‘ಸರಕಾರದ ವಿವಿಧ ಇಲಾಖೆಗಳಿಂದ ಅಲ್ಪಸಂಖ್ಯಾತರಿಗೆ ಲಭ್ಯವಿರುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಶಿಬಿರ’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಧ್ಯವರ್ತಿಗಳು, ದಲ್ಲಾಳಿಗಳು ಮತ್ತು ಬ್ಯಾಂಕ್ ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಇರುವ ಕಾರಣ, ಸರಳವಾಗಿ ಸಿಗುವ ಯೋಜ ನೆಗಳ ಲಾಭ ಇಂದು ಫಲಾನುಭವಿಗಳ ಪಾಲಿಗೆ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ಇದಕ್ಕೆ ಅರಿವಿನ ಕೊರತೆಯೇ ಪ್ರಮುಖ ಕಾರಣ. ಫಲಾನುಭವಿಗಳು ಯೋಜನೆಗಳ ಪ್ರಯೋಜನ ಪಡೆಯುವ ಹಂತದಲ್ಲಿ ಯಾವ ಕಾರಣಕ್ಕೂ ದಲ್ಲಾಳಿಗಳ ವಂಚನೆಗೆ ಒಳಗಾಗ ಬಾರದು ಎಂದು ಸಚಿವರು ಕರೆ ನೀಡಿದರು.

ಅರಿವು ಮೂಡಿಸುವ ಕಾರ್ಯಕ್ರಮ ಕೇವಲ ಸರಕಾರದ ಕಾರ್ಯಕ್ರಮ ಆಗಬಾರದು. ಸಮಾಜದ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾ ಗೊಳಿಸಬಹುದು. ಅರಿವು, ಮಾಹಿತಿಯ ಕೊರತೆಯಿಂದ ಸವಲತ್ತುಗಳಿಂದ ಫಲಾನು ಭವಿಗಳು ವಂಚಿತರಾದರೆ ಅದು ಸರಕಾರದ ತಪ್ಪಲ್ಲ ಎಂದು ಅವರು ಹೇಳಿದರು.

ಯೋಜನೆಗಳನ್ನು ಜಾರಿಗೊಳಿಸುವುದು ಮಾತ್ರ ಸರಕಾರದ ಜವಾಬ್ದಾರಿಯಲ್ಲ. ಅದರ ಕುರಿತು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ಇದಕ್ಕೆ ಸಮಾಜದ ಪೂರಕ ಸ್ಪಂದನೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಕೇಂದ್ರಗಳಾದ ಮಸೀದಿ, ಮದ್ರಸಾ, ಚರ್ಚ್, ಗುರುದ್ವಾರಗಳಲ್ಲಿ ಯೋಜನೆಗಳ ಪ್ರಚಾರ ವಾಗಬೇಕು. ಅದಕ್ಕಾಗಿ ಧಾರ್ಮಿಕ ನೇತಾರರು ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.

ಯಾರಿಗೂ ಅನ್ಯಾಯವಾಗುತ್ತಿಲ್ಲ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಸಚಿವರು ಸೇರಿದಂತೆ ಅಧಿಕಾರಿಗಳು ಮುಸ್ಲಿಮರೇ ಹೆಚ್ಚಾಗಿದ್ದಾರೆ. ಯೋಜನೆಗಳ ಫಲಾನುಭವಿಗಳೂ ಮುಸ್ಲಿಮರಾಗಿದ್ದಾರೆ ಎನ್ನುವ ವಾದ ಸರಿಯಲ್ಲ. ಜನಸಂಖ್ಯೆಗೆ ಅನು ಗುಣವಾಗಿ ಸವಲತ್ತುಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಇತರ ಅಲ್ಪಸಂಖ್ಯಾತ ಸಮು ದಾಯಕ್ಕೆ ವಂಚನೆ ಅಥವಾ ಅನ್ಯಾಯದ ಪ್ರಶ್ನೆಯೇ ಇಲ್ಲ. ಸೌಲಭ್ಯ ಪಡೆದುಕೊಳ್ಳು ವುದು ಪ್ರತಿಯೊಬ್ಬರ ಹಕ್ಕು ಎಂದು ಸಚಿವರು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ, ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಖಸ್ರೋ ಖುರೈಶಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎನ್.ಎ. ಹಾರಿಸ್, ನಸೀರ್ ಅಹ್ಮದ್, ಅಲ್ಪಸಂಖ್ಯಾತ್ಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮುಹ ಮ್ಮದ್ ಸನಾವುಲ್ಲಾ, ಆಯೋಗದ ಕಾರ್ಯ ದರ್ಶಿ ಅತೀಖ್ ಅಹ್ಮದ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಅಲಿ ರಝ್ವಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ನಾಯಕ್ ಸೇರಿದಂತೆ ಇತರರು ಭಾಗವಹಿಸಿದ್ದರು

Share: